ಸೂರ್ಯಗ್ರಹಣ 25.10.2022.

ಶುಭ ಫಲ – ಧನು, ಮಕರ, ವೃಷಭ, ಸಿಂಹ, ರಾಶಿ

ಮಿಶ್ರ ಫಲ – ಕನ್ಯಾ,ಕುಂಭ, ಮೇಷ, ಮಿಥುನ ರಾಶಿ
ಅಶುಭ ಫಲ – ತುಲಾ, ಕರ್ಕ, ವೃಶ್ಚಿಕ, ಮೀನ ರಾಶಿ
ವಿಶೇಷ ಅಶುಭ ಫಲ – ತುಲಾ ರಾಶಿ, ಚಿತ್ತಾ ನಕ್ಷತ್ರ, ಸ್ವಾತಿ ನಕ್ಷತ್ರ 
Bangalore : 5.12 pm
ಈ ಸಮಯದ ನಂತರ ಕೂಡಲೇ ಗ್ರಹಣಸ್ಪರ್ಶ ಸ್ನಾನ ಮಾಡುವುದು. ಗ್ರಹಣ ಮೋಕ್ಷ ನಂತರ ಅಂದರೆ 6.20ರ ನಂತರ ಸ್ನಾನ ಮಾಡುವುದು. ಆದರೆ ಫಲಾಹಾರ ಭೋಜನ ಇಲ್ಲ.
ಮಧ್ಯ ಕಾಲ : 05.47 PM
ಸೂರ್ಯಾಸ್ತ ಕಾಲ : 5.57 pm
( ಬೆಂಗಳೂರು )
ಮೋಕ್ಷ ಕಾಲ :6.20 pm
(ಸೂರ್ಯಾಸ್ತ ನಂತರ)
ಗ್ರಹಣದ ಒಟ್ಟು ಕಾಲ : 57 ನಿಮಿಷ

ವೇಧಾರಂಭ : 25-10-2022, ಮಂಗಳವಾರ ಸೂರ್ಯೋದಯದಿಂದಲೇ ವೇಧಾರಂಭವಾಗುತ್ತದೆ.

1. ಈ ಸಲದ ಗ್ರಹಣ ದೋಷ ಇರುವವರು ಯಾವ ದಾನ ಮಾಡಬೇಕು?
*ಉತ್ತರ* – ಹುರಳೀ ದಾನ
ಶಕ್ತಿಯಿದ್ದವರು ಸುವರ್ಣ, ರಜತ ದಾನ ಮಾಡಿ. ಇಲ್ಲದವರು ಒಂದು ಬಟ್ಟಲಲ್ಲಿ ಅಥವಾ ದೊನ್ನೆಯಲ್ಲಿ ಹುರಳೀ ಯಥಾಶಕ್ತಿ ದಕ್ಷಿಣೆ ಸಹಿತ ದಾನ ಮಾಡಿ.
ಗ್ರಹಣ ಸಮಯದಲ್ಲಿ ಸಾಧ್ಯವಾದಷ್ಟೂ ಸಾಧನೆ ಮಾಡಿಕೊಳ್ಳಿ ಅಧಿಕ ಪುಣ್ಯ ಗಳಿಸಿ

2. ಗ್ರಹಣ ಸಮಯದಲ್ಲಿ ಹಾಲು, ಮೊಸರು, ತರಕಾರಿ ಮುಂತಾದವುಗಳು ಹಾಳಾಗದಂತೆ ಅವುಗಳ ಮೇಲೆ ಏನನ್ನು ಹಾಕಬೇಕು?
*ಉತ್ತರ*– ದರ್ಬೆ

3.ಗ್ರಹಣ ಹಿಡಿಯುವ ದಿನ ಯಾವ ಯಾವ ಸಮಯದಲ್ಲಿ ಸ್ನಾನ ಮಾಡಬೇಕು?
*ಉತ್ತರ* – ಗ್ರಹಣ ಸ್ಪರ್ಶ ಸಮಯದಲ್ಲಿ ಮತ್ತು ಗ್ರಹಣ ಮೋಕ್ಷ ನಂತರ

4.ಗ್ರಹಣದ ದಿನ ಯಾವಾಗ ಅಡುಗೆ ಮಾಡಬೇಕು?
*ಉತ್ತರ*– ಗ್ರಹಣ ಮೋಕ್ಷಾ ನಂತರ ಸ್ನಾನ ಮಾಡಿ ನಂತರ ತಯಾರಿಸಬೇಕು. ಆದರೆ ಈ ಸಲ ಗ್ರಹಣ ಮೋಕ್ಷಾನಂತರದಲ್ಲಿ ಸೂರ್ಯಾಸ್ತ ಆಗಿರುವುದರಿಂದ ಬರೀ ಸ್ನಾನ ಅಷ್ಟೇ. ಮಾರನೇ ದಿನ ಬೆಳಿಗ್ಗೆ ಸೂರ್ಯೋದಯ ನಂತರ ಸ್ನಾನ ಮಾಡಿ ಪೂಜೆ ಮಾಡಿ ಆಹಾರ ಸ್ವೀಕರಿಸಬಹುದು.

5.ಸೂತಕ ಇದ್ದವರು ಮತ್ತು ರಜಸ್ವಲೆಯಾದವರು ಸ್ನಾನ ಮಾಡಬಹುದಾ ಬೇಡವಾ?
*ಉತ್ತರ* – ಮಾಡಬೇಕು.

6.ಗ್ರಹಣ ಸಮಯದಲ್ಲಿ ಏನೇನು ಮಾಡಬಾರದು?
*ಉತ್ತರ* – ನಿದ್ದೆ, ಊಟ, ತಿಂಡಿ, ಮಲಮೂತ್ರ ವಿಸರ್ಜನೆ , ಮೈಥುನ ನಿಷಿದ್ಧ. ಅದರಿಂದ ಅನಾರೋಗ್ಯವಾಗುತ್ತೆ. ಈ ಸಂದರ್ಭದಲ್ಲಿ ಗರ್ಭ ಧರಿಸಿದರೆ ಆ ಮಗುವಿಗೆ ಅಂಗವಿಕಲತೆಯಾಗುವ ಸಂದರ್ಭ ಬರಬಹುದು.

7.ಎಷ್ಟು ಗಂಟೆಯವರೆಗೆ ಊಟ ಮಾಡಬಹುದು.
*ಉತ್ತರ* – ಈದಿನ ಯಾವುದೇ ಆಹಾರ ಸ್ವೀಕರಿಸುವಂತಿಲ್ಲ. ಅಶಕ್ತರು, ಬಸುರಿ, ಬಾಣಂತಿಯರು, ಮತ್ತು ಎಂಟು ವರ್ಷದ ಒಳಗಿನ ಮಕ್ಕಳು 25.10.22 ಸೂರ್ಯ ಗ್ರಹಣದ ಮೂರು ಗಂಟೆ ಮುನ್ನ ಮಾಡಬಹುದು.

8.ಯಾರು ಅಶಕ್ತರು ?
*ಉತ್ತರ* – ಬಸುರಿ, ಬಾಣಂತಿ, ೮೦ ವರ್ಷ ದಾಟಿದವರು, ೮ ವರ್ಷದ ಒಳಗಿನ ಮಕ್ಕಳು, ಮತ್ತು ಕಾಯಿಲೆಯಿಂದ ಅಸ್ವಸ್ಥರಾದವರು

9.ಜಾತಾಶೌಚ ಮತ್ತು ಮೃತಾಶೌಚ ಇರುವವರು ಹೇಗೆ ಆಚರಿಸಬೇಕು?
*ಉತ್ತರ* – ಅವರೂ ಸ್ನಾನ ಮಾಡಬೇಕು. ಬಾವಿ, ನದೀ, ಸರೋವರದಲ್ಲಿ ಬೇಡ. ಮನೆಯಲ್ಲಿ ಮಾಡಿ. ಮೃತಾಶೌಚವಿರುವವರು ಬೇರೆಯವರನ್ನು ಮುಟ್ಟುವಂತಿಲ್ಲ.
ದಾನಧರ್ಮ ಮಾಡುವಂತಿಲ್ಲ ಸ್ವೀಕರಿಸುವಂತಿಲ್ಲ. ಅವರು ಬೇರೆಯವರಿಗೆ ನಮಿಸುವಂತಿಲ್ಲ. ಬೇರೆಯವರೂ ಅಶೌಚವಿರುವವರಿಗೆ (ಯಾವ ಸಂದರ್ಭದಲ್ಲೂ) ನಮಿಸುವಂತಿಲ್ಲ.

10.ಗ್ರಹಣ ನಿಮಿತ್ತ ದಾನ ಯಾವಾಗ ಕೊಡಬೇಕು?
*ಉತ್ತರ* – ಗ್ರಹಣ ಮಧ್ಯಕಾಲದಲ್ಲಿ ಕೊಡತಕ್ಕದ್ದು. ಅಕಸ್ಮಾತ್ ಆ ಸಮಯದಲ್ಲಿ ಕೊಡಲಾಗದಿದ್ದರೆ ಸಂಕಲ್ಪ ಮಾಡಿ ತೆಗೆದಿಟ್ಟು ನಂತರ ಕೊಡಬಹುದು

ಗ್ರಹಣ ಸಮಯದಲ್ಲಿ ಪಠಿಸಬೇಕಾದ ಸ್ತೋತ್ರಗಳು:
ಯೋಸೌ ವಜ್ರಧರೋ ದೇವ: ಆದಿತ್ಯಾನಾಂ ಪ್ರಭುರ್ಮತ: |
ಸಹಸ್ರನಯನ: ಶಕ್ರೋ ಗ್ರಹಪೀಡಾಂ ವ್ಯಪೋಹತು |
ಮುಖಂ ಯ: ಸರ್ವದೇವಾನಾಂ ಸಪ್ತಾರ್ಚಿರಮಿತದ್ಯುತಿ: |
ಸೂರ್ಯ/ ಪರಾಗಸಂಭೂತಾಂ ಅಗ್ನೇ: ಪೀಡಾಂ ವ್ಯಪೋಹತು|
ಯ: ಕರ್ಮಸಾಕ್ಷೀ ಲೋಕಾನಾಂ ಧರ್ಮೋ ಮಹಿಷವಾಹನ: |
ಯಮ: ಸೂರ್ಯಪರಾಗ ಸಂಭೂತಾಂ ಗ್ರಹಪೀಡಾಂ ವ್ಯಪೋಹತು |
ರಕ್ಷೋಗಣಾಧಿಪ: ಸಾಕ್ಷಾತ್ ನೀಲಾಂಜನಸಮಪ್ರಭ: |
ಖಡ್ಗಹಸ್ತೋಽತಿಭೀಮಶ್ಚ ಗ್ರಹಪೀಡಾಂ ವ್ಯಪೋಹತು ||
ನಾಗಪಾಶಧರೋ ದೇವ: ಸದಾ ಮಕರವಾಹನ: |
ಸ ಜಲಾಧಿಪತಿರ್ದೇವ: ಗ್ರಹಪೀಡಾಂ ವ್ಯಪೋಹತು ||
ಪ್ರಾಣರೂಪೋ ಹಿ ಲೋಕಾನಾಂ ಸದಾ ಕೃಷ್ಣಮೃಗಪ್ರಿಯ: |
ವಾಯುಶ್ಚ ಸೂರ್ಯ ಪರಾಗೋತ್ಥಾಂ ಗ್ರಹಪೀಡಾಂ ವ್ಯಪೋಹತು ||
ಯೋಽಸೌ ನಿಧಿಪತಿರ್ದೇವ: ಖಡ್ಗಶೂಲಗದಾಧರ: |
ಸೂರ್ಯ ಪರಾಗಕಲುಷಂ ಧನದೋಽತ್ರ ವ್ಯಪೋಹತು |
ಯೋಽಸಾವಿಂದುಧರೋ ದೇವ: ಪಿನಾಕೀ ವೃಷವಾಹನ: |
ಸೂರ್ಯ ಪರಾಗಪಾಪಾನಿ ವಿನಾಶಯತು ಶಂಕರ:||
ತ್ರೈಲೋಕ್ಯೇ ಯಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ|
ಬ್ರಹ್ಮವಿಷ್ಣುರ್ಕರುದ್ರಾಶ್ಚ ದಹಂತು ಮಮ ಪಾತಕಂ ||

*ಸರ್ವೇ ಜನಾಃ ಸುಖಿನೋ ಭವಂತು*

ಕೆ.ಅರ್.ಬಾಲಾಜಿ


Published by bangalorecitynewsforyou

PAVAN KUMAR BG

Leave a comment